Urdu   /   English   /   Nawayathi

ತಂದೆಯ ಮೇಲಿನ ದ್ವೇಷಕ್ಕೆ ಬಾಲಕನ ಕೊಲೆ: ಆರೋಪಿಗೆ ಜೀವಾವಧಿ

share with us

ಕಾಸರಗೋಡು: 19 ಜೂನ್ (ಫಿಕ್ರೋಖಬರ್ ಸುದ್ದಿ) ಎಂಟು ವರ್ಷದ ಬಾಲಕನ ಕೊಲೆ ಪ್ರಕರಣದಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪಿತ್ತಿದೆ. ಅಬ್ಬಾಸ್ ಮತ್ತು ಆಯೇಷಾ ಅವರ ಮಗ ಮೊಹ್ಮದ್ ಫಹಾದ್ ನನ್ನು ಕೊಲೆಗೈದ ಪ್ರಕರಣದಲ್ಲಿ ಅಪರಾಧಿ ಪೆರಿಯ ಕನ್ನೂತ್ ನಿವಾಸಿ ವಿಜಯನ್(31)ಗೆ ಶಿಕ್ಷೆ ವಿಧಿಸಲಾಗಿದೆ.

ಐವತ್ತು ಸಾವಿರ ರೂ. ದಂಡವನ್ನು ಕೋರ್ಟ್ ವಿಧಿಸಿದ್ದು, ದಂಡದ ಮೊತ್ತ ತೆರಲು ವಿಫಲನಾದರೆ ಇನ್ನೂ ಮೂರು ವರ್ಷ ಹೆಚ್ಚಿನ ಜೈಲುವಾಸ ವಿಧಿಸಿ ತೀರ್ಪಿತ್ತಿದೆ.

ಸರಕಾರಿ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿ ಫಹಾದ್ ಜುಲೈ9, 2015ರಂದು ಸಹೋದರಿಯೊಂದಿಗೆ ಮನೆಗೆ ತೆರಳುವ ಸಂದರ್ಭ ವಿಜಯನ್ ಫಹಾದ್ ಮೇಲೆ ದಾಳಿ ಮಾಡಿದ್ದ.

ಬಾಲಕನನ್ನು ಹಲವು ಬಾರಿ ವಿಜಯನ್ ಇರಿದ ಪರಿಣಾಮ ಆತ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವಪ್ಪಿದ್ದ. ಸ್ಥಳೀಯರು ವಿಜಯನ್ ನನ್ನು ಹಿಡಿದು ಬೇಕಲ ಪೊಲೀಸರಿಗೆ ನೀಡಿದ್ದರು.

ಬಾಲಕನ ತಂದೆಯ ಮೇಲಿದ್ದ ಮೇಲಿದ್ದ ಹಳೆ ದ್ವೇಷದಿಂದ ಈ ಕೊಲೆ ನಡೆದಿದೆ ಎಂಬುದು ತನಿಖೆ ಸಂದರ್ಭ ತಿಳಿದು ಬಂದಿತ್ತು.

ಕ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا