Urdu   /   English   /   Nawayathi

ಹೊತ್ತಿಉರಿದ ಪೆಟ್ರೋಲ್‌ ಟ್ಯಾಂಕರ್‌: ಕ್ಲೀನರ್‌ಗೆ ತೀವ್ರ ಗಾಯ

share with us

ಕಡೂರು(ಚಿಕ್ಕಮಗಳೂರು): 19 ಜೂನ್ (ಫಿಕ್ರೋಖಬರ್ ಸುದ್ದಿ) ಪೆಟ್ರೋಲ್‌ ಟ್ಯಾಂಕರ್‌ವೊಂದು ಇಲ್ಲಿನ ಗಿರಿಯಾಪುರದ ನಡುರಸ್ತೆಯಲ್ಲಿ ಪಲ್ಟಿಯಾಗಿ, ಹೊತ್ತಿಉರಿದ ಘಟನೆ ನಡೆದಿದೆ. ಕಡೂರಿನಿಂದ ಹೊಸದುರ್ಗದ ಕಡೆಗೆ ಟ್ಯಾಂಕರ್‌ ತೆರಳುತ್ತಿತ್ತು. ಅವಘಡದಲ್ಲಿ ಗಾಯಗೊಂಡಿರುವ ಕ್ಲೀನರ್‌ನನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಟ್ಯಾಂಕರ್‌ ದಹನದಿಂದಾಗಿ ಪ್ರದೇಶದ 100 ಮೀ. ವ್ಯಾಪ್ತಿಯಲ್ಲಿ ಬೆಂಕಿ ಮತ್ತು ದಟ್ಟ ಹೊಗೆ ಆವರಿಸಿತ್ತು. ಬೆಂಕಿಯ ಕೆನ್ನಾಲಗೆ ಪಕ್ಕದಲ್ಲಿನ ಐದು ಮನೆಗಳಿಗೂ ತಗಲಿತ್ತು. ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

https://youtu.be/c8ih8clOaho

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا