Urdu   /   English   /   Nawayathi

ಪಾಸ್‌ಪೋರ್ಟ್‌ ರದ್ದಾದರೂ ನೀರವ್‌ ಮೋದಿ ಪ್ರಯಾಣ ನಿರಾತಂಕ!

share with us

ನವದೆಹಲಿ: 19 ಜೂನ್ (ಫಿಕ್ರೋಖಬರ್ ಸುದ್ದಿ) ತಲೆಮರೆಸಿಕೊಂಡಿರುವ ವಜ್ರದ ಉದ್ಯಮಿ ನೀರವ್‌ ಮೋದಿಯ ಪಾಸ್‌ಪೋರ್ಟ್‌ ಅನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ ಎಂಬ ಮಾಹಿತಿಯನ್ನು ಇಂಟರ್‌ಪೋಲ್‌ಗೆ ತಿಳಿಸಿದ್ದರೂ, ಅವರು ಹಲವು ದೇಶಗಳಲ್ಲಿ ನಿರಾತಂಕವಾಗಿ ಪ್ರಯಾಣಿಸುತ್ತಿರುವುದು ತಿಳಿದುಬಂದಿದೆ ಎಂದು ಸಿಬಿಐ ಹೇಳಿದೆ.

ಫೆಬ್ರುವರಿ 15ರಂದೇ ನಾವು ಈ ಬಗ್ಗೆ ಇಂಟರ್‌ಪೋಲ್‌ಗೆ ಮಾಹಿತಿ ನೀಡಿದ್ದೇವೆ. ಫೆಬ್ರುವರಿ 24ರ ವೇಳೆಗೆ, ಇಂಟರ್‌ಪೋಲ್‌ನ ಎಲ್ಲ ಸದಸ್ಯ ರಾಷ್ಟ್ರಗಳ ಕಚೇರಿಗೂ ಈ ಮಾಹಿತಿ ಹೋಗಿದೆ. ನಮ್ಮ ಮನವಿ ಮೇರೆಗೆ, ಇಂಟರ್‌ಪೋಲ್‌ ಕೂಡ ಈ ವಿಷಯವನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಸಾರ ಮಾಡಿದೆ ಎಂದು ಸಿಬಿಐ ಹೇಳಿದೆ.

ಅಮೆರಿಕ, ಸಿಂಗಪುರ, ಬೆಲ್ಜಿಯಂ, ಯುಎಇ ಹಾಗೂ ಫ್ರಾನ್ಸ್‌ನಲ್ಲಿ ನೀರವ್‌ ಮೋದಿ ಪ್ರಯಾಣಿಸಿರುವ ಸಾಧ್ಯತೆ ಇದೆ. ಹೀಗಾಗಿ, ಅವರ ಪಾಸ್‌ಪೋರ್ಟ್‌ ರದ್ದುಪಡಿಸಿರುವ ಮಾಹಿತಿಯನ್ನು ಈ ದೇಶಗಳಿಗೂ ತಿಳಿಸುವಂತೆ ಸಿಬಿಐ ಇಂಟರ್‌ಪೋಲ್‌ಗೆ ಮನವಿ ಮಾಡಿದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ ನಕಲಿ ದಾಖಲೆ ನೀಡಿ ವಂಚಿಸಿರುವ ಆರೋಪ ನೀರವ್‌ ಮೋದಿ ಮೇಲಿದ್ದು, ಅವರು ತಲೆಮರೆಸಿಕೊಂಡಿದ್ದಾರೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا