Urdu   /   English   /   Nawayathi

‘ಗ್ರೀಸ್‌ ಜೊತೆ ಸಹಭಾಗಿತ್ವ’

share with us

ಅಥೆನ್ಸ್‌: 19 ಜೂನ್ (ಫಿಕ್ರೋಖಬರ್ ಸುದ್ದಿ) ‘ಮೂಲಸೌಕರ್ಯ, ಇಂಧನ ಹಾಗೂ ಸೇವಾಕ್ಷೇತ್ರದಲ್ಲಿ ಭಾರತ ಹಾಗೂ ಗ್ರೀಸ್‌ ಸಹಭಾಗಿತ್ವ ಹೊಂದಲು ಸಾಕಷ್ಟು ಅವಕಾಶವಿದೆ’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ತಿಳಿಸಿದ್ದಾರೆ.

ಮೂರು ರಾಷ್ಟ್ರಗಳ ಪ್ರವಾಸದಲ್ಲಿರುವ ಅವರು ಭಾರತೀಯ ರಾಯಭಾರ ಕಚೇರಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು.

‘2025ರ ವೇಳೆಗೆ ವಿಶ್ವದಲ್ಲೇ ಭಾರತ ಅತೀ ದೊಡ್ಡ ಗ್ರಾಹಕ ಮಾರುಕಟ್ಟೆಯಾಗಲಿದೆ’ ಎಂದು ವಿಶ್ವಬ್ಯಾಂಕ್‌ ಮತ್ತು ವಿಶ್ವಹಣಕಾಸು ಸಂಸ್ಥೆ ತಿಳಿಸಿದೆ. ಈ ಕಾರಣದಿಂದ ಎರಡು ರಾಷ್ಟ್ರಗಳು ಇನ್ನಷ್ಟು ಸಹಭಾಗಿತ್ವ ಹೊಂದಬೇಕು’ ಎಂದು ಅವರು ಕರೆನೀಡಿದರು.

ಭಾರತ ಹಾಗೂ ಗ್ರೀಕ್ ಪುರಾತನ ನಾಗರಿಕತೆ, ಸಾಂಸ್ಕೃತಿಕ ಪರಂಪರೆ ಹೊಂದಿದ ರಾಷ್ಟ್ರಗಳಾವೆ ಎಂದ ಅವರು ಎರಡು ರಾಷ್ಟ್ರಗಳ ಪುರಾತನ ಬಾಂಧವ್ಯವನ್ನು ನೆನಪಿಸಿದರು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا