Urdu   /   English   /   Nawayathi

ಜಪಾನಿನಲ್ಲಿ ಭೂಕಂಪ; ಮೂವರು ಸಾವು

share with us

ಟೋಕಿಯೋ: 18 ಜೂನ್ (ಫಿಕ್ರೋಖಬರ್ ಸುದ್ದಿ) ಜಪಾನಿನ ಎರಡನೇ ದೊಡ್ಡ ನಗರವಾದ ಒಸ್ಕಾ ಎಂಬಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ ಭೂಕಂಪದಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.1ರಷ್ಟು ದಾಖಲಾಗಿದೆ. ಸುನಾಮಿ ಸಂಭವಿಸುವ ಸಾಧ್ಯತೆಯಿಲ್ಲ. ಇಲ್ಲಿನ ಎಲ್ಲಾ ಕೈಗಾರಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ನೀರಿನ ಪೈಪುಗಳು ಒಡೆದುಹೋಗಿವೆ. ಕೆಲವು ಮನೆಗಳು ನಾಶವಾಗಿವೆ.

ದೇಶದ ನಿವಾಸಿಗಳ ರಕ್ಷಣೆಗೆ ಹೆಚ್ಚಿನ ಗಮನ ಕೊಡಲು ಆಡಳಿತಗಾರರಿಗೆ ಪ್ರಧಾನ ಮಂತ್ರಿ ಶಿಂಜೊ ಅಬೆ ಸೂಚಿಸಿದ್ದಾರೆ.

ಪ್ರಾರಂಭದಲ್ಲಿ ಭೂಕಂಪದ ತೀವ್ರತೆ 5.9 ಮಾತ್ರ ಇತ್ತು. ನಂತರ 6.1ಗೆ ಏರಿಕೆಯಾಯಿತು ಎಂದು ಜಪಾನಿನ ಹವಾಮಾನ ಇಲಾಖೆ ಹೇಳಿದೆ.

ಭೂಕಂಪ ಸಂಭವಿಸುವ ವೇಳೆ ನಾವೆಲ್ಲರೂ ಮಲಗಿದ್ದೆವು. ಭೂಮಿ ಭಯಂಕವಾಗಿ ನಡುಗಲು ಶುರುವಾಗುತ್ತಿದ್ದಂತೆ ಎದ್ದು ಕುಳಿತುಕೊಂಡೆವು ಎಂದು ಒಸ್ಕಾದ ಹೋಟೆಲ್‌ವೊಂದರಲ್ಲಿ ತಂಗಿದ್ದ ಅಮೆರಿಕದ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಇಡೀ ರಾಷ್ಟ್ರವೇ ಭೀಕರವಾಗಿ ಕಂಪಿಸಿತು. ನಾನು ಕಂಡ ಮೊದಲ ಭೂಕಂಪ ಇದಾಗಿದ್ದು, ಭಯಾನಕವಾಗಿತ್ತು. ಇದನ್ನು ಕನಸೆಂದು ಭಾವಿಸಿ ಗೊಂದಲಕ್ಕೀಡಾದೆ ಎಂದು ಮಹಿಳಾ ಪ್ರತ್ಯಕ್ಷದರ್ಶಿಯೊಬ್ಬರು ಭೂಕಂಪದ ತೀವ್ರತೆಯನ್ನು ವಿವರಿಸಿದ್ದಾರೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا