Urdu   /   English

ಆಸ್ಪತ್ರೆ ಗುತ್ತಿಗೆ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಿದ ಶಾಸಕರು

share with us

ಹರಿಹರ: 14 ಜೂನ್ (ಫಿಕ್ರೋಖಬರ್ ಸುದ್ದಿ) ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರಿತ ಕಾರ್ಮಿಕರಿಗೆ ಕಳೆದ ನಾಲ್ಕು ತಿಂಗಳಿನಿಂದಲೂ ವೇತನ ನೀಡುತ್ತಿಲ್ಲಾ ಈ ಬಗ್ಗೆ ಮನವಿ ಮಾಡಿದರು ಸಹ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ಹಾಗೂ ಡಿಹೆಚ್ಓ ನಿರ್ಲಕ್ಷ್ಯ ತೋರುತ್ತಿದ್ದಾರೆಂದು ಅಸಂಘಟಿತ ಕಾರ್ಮಿಕರು ತಮ್ಮ ಅಳಲನ್ನು ಶಾಸಕ ಎಸ್.ರಾಮಪ್ಪನವರ ಬಳಿ ತೋಡಿಕೊಂಡರು.
ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಶುದ್ಧ ನೀರಿನ ಘಟಕ ಸ್ಥಾಪನೆ ಮಾಡಲು ಸ್ಥಳ ಪರಿಶೀಲನೆಗೆಂದು ಶಾಸಕರು ಆಗಮಿಸಿದ್ದ ವೇಳೆ ಅವರೊಂದಿಗೆ ಮಾತನಾಡಿದ ನೌಕರರು ಕಳೆದ 15 ವರ್ಷಗಳಿಂದ ಆಸ್ಪತ್ರೆಯ ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ್ದೇವೆ. ಆದರೆ ಇಲ್ಲಿಯವರೆಗೂ ಪ್ರತಿ ತಿಂಗಳಿಗೆ ವೇತನವನ್ನು ಯಾವ ವರ್ಷದಲ್ಲೂ ನೀಡಿಲ್ಲ, ಪ್ರತಿ ಮೂರು ನಾಲ್ಕು ತಿಂಗಳಿಗೊಮ್ಮೆ ವೇತನ ನೀಡುತ್ತಾರೆ. ಇದರಿಂದ ಜೀವನ ನಡೆಸುವುದು ತುಂಬ ಕಷ್ಟಕರವಾಗಿದೆ. ಈಗಾಗಲೇ ಶಾಲಾ ಕಾಲೇಜುಗಳು ಪ್ರಾರಂಭವಾಗಿವೆ. ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವಿಲ್ಲದೆ ಪರದಾಡುತ್ತಿದ್ದೇವೆ ಎಂದು ಸಮಸ್ಯೆ ತೋಡಿಕೊಂಡರು. ಆಡಳಿತ ವೈದ್ಯಾಧಿಕಾರಿಗಳು ಡಿಹೆಚ್ಓ ಸಮಸ್ಯೆಗೆ ಸ್ಪಂದಿಸುತ್ತಿಲ್ಲ, ಪ್ರತಿ ವರ್ಷವು ಟೆಂಡರ್ ಪ್ರಕ್ರಿಯೆಯನ್ನು ಮಾರ್ಚ್ ಏಪ್ರಿಲ್‍ನಲ್ಲಿ ಮಾಡುವ ಪದ್ಧತಿಯಿದೆ. ಆದರೆ ಜಿಲ್ಲಾ ಆರೋಗ್ಯ ಇಲಾಖೆಯವರು ಟೆಂಡರ್ ಕರೆಯುವ ಪ್ರಕ್ರಿಯೆಯನ್ನು ಮಾಡುವುದನ್ನು ನಿರ್ಲಕ್ಷಿಸುತ್ತಿದ್ದಾರೆ. ಇದರಿಂದ ಕಾರ್ಮಿಕರಿಗೆ ಎಷ್ಟು ತೊಂದರೆಯಾಗುತ್ತದೆ ಎಂಬುದು ಅವರಿಗೆ ಅರಿವಿಲ್ಲ ವಿಳಂಬ ಧೋರಣೆ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕೂಡಲೇ ಶಿಸ್ತಿನ ಕ್ರಮಜರುಗಿಸಿ ಕಾರ್ಮಿಕರಿಗೆ ವೇತನ ಮತ್ತು ಅವರ ಜೀವನ ಸುಗಮವಾಗಿ ನಡೆಸುವುದಕ್ಕೆ ಶಾಸಕರು ಗಮನವಹಿಸಬೇಕೆಂದು ಅಸಂಘಟಿಕ ಸಂಘದ ಪ್ರಧಾನ ಕಾರ್ಯದರ್ಶಿ ಎನ್‍ಇ.ಸುರೇಶ್ ಮನವಿ ಮಾಡಿದರು.
ನಂತರ ಶಾಸಕ ಎಸ್.ರಾಮಪ್ಪ ಮಾತನಾಡಿ ಆಸ್ಪತ್ರೆಯ ಮಲಮೂತ್ರ ಸ್ವಚ್ಚತೆ ಮಾಡುವ ಕಾರ್ಮಿಕರಿಗೆ ವೇತನ ಮತ್ತು ಇತರೆ ಪಿಎಫ್ ಇಎಸ್‍ಐ ಬಗ್ಗೆ ಅನ್ಯಾಯವಾಗುತ್ತಿದ್ದರು ಅಧಿಕಾರಿಗಳು ಏಕೆ ಗಮನವಹಿಸುತ್ತಿಲ್ಲಾ? ಪ್ರತಿ ತಿಂಗಳು ಇವರಿಗೆ ವೇತನ ಮತ್ತು ಟೆಂಡರ್ ಪ್ರಕ್ರಿಯೆ ನಡೆಯುವುದು ಏಕೆ ವಿಳಂಬವಾಗುತ್ತಿದೆ ಎಂದು ಸ್ಥಳದಲ್ಲಿದ್ದ ಆಡಳಿತ ವೈದ್ಯಾಧಿಕಾರಿ ಸಿದ್ಧಪ್ಪ ಕೋಲ್ಕರ್‍ಗೆ ತರಾಟೆಗೆ ತಗೆದುಕೊಂಡರು.
ನಂತರ ಡಿಹೆಚ್ಓ ಡಾ. ತ್ರಿಫುಲಾಂಭರವರಿಗೆ ದೂರವಾಣಿಯ ಮೂಲಕ ಕರೆ ಮಾಡಿ ಗುತ್ತಿಗೆ ಆಧಾರಿತ ಕಾರ್ಮಿಕರಿಗೆ ವೇತನ ವಿಳಂಬದ ಕುರಿತು ಮಾತನಾಡಿ ನಾಲ್ಕೈದು ತಿಂಗಳ ಗಟ್ಟಲೆ ಕಾರ್ಮಿಕರಿಗೆ ವೇತನ ನೀಡಿಲ್ಲವೆಂದರೆ ಅವರ ಕುಟುಂಬ ಜೀವನ ನಡೆಸುವುದು ಹೇಗೆ? ಕೂಡಲೇ ಅವರಿಗೆ ವೇತನ ಮತ್ತು ಪಿಎಫ್ ಇಎಸ್‍ಐ ಕೊಡಿಸಿಕೊಡುವುದಕ್ಕೆ ಸೂಚನೆ ನೀಡಿದರು. ಇನ್ನೂ ಒಂದು ವಾರದೊಳಗೆ ನಿಮ್ಮ ವೇತನವನ್ನು ಕೊಡಿಸುತ್ತೇನೆಂದು ಶಾಸಕರು ಕಾರ್ಮಿಕರಿಗೆ ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ನಗರಸಭೆ ಸದಸ್ಯರಾದ ಶಂಕರ್ ಖಟಾವ್‍ಕರ್, ಕೆ.ಮರಿದೇವ್, ಎಸ್.ಎಂ.ವಸಂತ್, ಹಾಗೂ ರೇವಣಸಿದ್ದಪ್ಪ, ಆಸ್ಪತ್ರೆಯ ಶುಶ್ರೂಷಕಿ ಶೋಭಾ, ಅಸಂಘಟಿತ ಕಾರ್ಮಿಕರು ಇದ್ದರು.

ಸಂ, ವಾ ವರದಿ

More

Prayer Timings

Fajr 03:18 فجر
Dhuhr 12:57 الظهر
Asr 16:58 أسر
Maghrib 20:30 مغرب
Isha 22:27 عشا

Prayer Timings

Fajr 03:18 فجر
Dhuhr 12:57 الظهر
Asr 16:58 أسر
Maghrib 20:30 مغرب
Isha 22:27 عشا