Urdu   /   English   /   Nawayathi

ವಿಶ್ವಕಪ್ ಫುಟ್ಬಾಲ್ ಕ್ರೇಜ್, 82 ವರ್ಷದ ಈ ಜರ್ಮನ್ ಅಭಿಮಾನಿ ಮಾಡಿದ ಸಾಹಸವೇನು ಗೊತ್ತೇ..?

share with us

ಜರ್ಮನಿ: 14 ಜೂನ್ (ಫಿಕ್ರೋಖಬರ್ ಸುದ್ದಿ) ಕ್ರೀಡಾಭಿಮಾನವೇ ಅಂಥದ್ದು.. ತಮ್ಮ ನೆಚ್ಚಿನ ಕ್ರೀಡೆಗಳನ್ನು ನೋಡಲು ಅಭಿಮಾನಿಗಳು ಏನೆಲ್ಲಾ ಶ್ರಮ-ಸಾಹಸ ಮಾಡುತ್ತಾರೆ ಎಂಬುದಕ್ಕೆ ಜರ್ಮನಿಯ ವೃದ್ಧ ಫುಟ್ಬಾಲ್ ಪ್ರೇಮಿ ಸಾಕ್ಷಿಯಾಗಿ ನಿಲ್ಲುತ್ತಾರೆ. ಇಷ್ಟಕ್ಕೂ ಈ ಅಭಿಮಾನಿ ಮಾಡಿದ್ದೇನು.. ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ… ರಷ್ಯಾದಲ್ಲಿ ನಡೆಯುತ್ತಿರುವ ವಿಶ್ವಕಪ್ ಫುಟ್ಬಾಲ್ ನೋಡಲು ಪ್ರತಿಯೊಬ್ಬರ ಪಯಣ ಒಂದೊಂದು ವಿಶಿಷ್ಟ ಅನುಭವ. ಈ ವೃದ್ಧ ಅಭಿಮಾನಿ ತನ್ನ ಮುದ್ದು ನಾಯಿ ಜೊತೆ ಹಳೆ ಟ್ರ್ಯಾಕ್ಟರ್‍ನಲ್ಲಿ ಜರ್ಮನಿಯಿಂದ ರಷ್ಯಾಕ್ಕೆ ಪ್ರವಾಸ ಕೈಗೊಂಡು ಚಕಿತಗೊಳಿಸಿದ್ದಾರೆ.

Footboll-04

82 ವರ್ಷದ ಹುಬೋಲ್ಟ್ ವ್ರಿಥ್-ಅವರು ಓಬೀರಾಯನ ಕಾಲದ ಟ್ರ್ಯಾಕ್ಟರ್‍ನಲ್ಲಿ ದೇಶದಿಂದ ದೇಶಕ್ಕೆ ಪ್ರಯಾಣ ಮಾಡಿರುವುದು ಅತ್ಯಂತ ವಿಶಿಷ್ಟ ಎನಿಸಿದೆ. 1960ಕ್ಕೂ ಹಿಂದಿನ ಈ ಲಾಂಝ್ ಬುಲ್‍ಡಾಗ್ ಟ್ರ್ಯಾಕ್ಟರ್ ಗಂಟೆಗೆ ಕೇವಲ 20 ಕಿಲೋ ಮೀಟರ್ ಗರಿಷ್ಠ ವೇಗದಲ್ಲಿ ಚಲಿಸುತ್ತದೆ. ಮಧ್ಯ ಯೂರೋಪ್ ದೇಶದ ಜನರೊಂದಿಗೆ ಸಂಪರ್ಕ ಮತ್ತು ನಯನ ಮನೋಹರ ದೃಶ್ಯಗಳು ನನ್ನ ಪಯಣದ ಬಹು ಮುಖ್ಯ ಸಂಗತಿಗಳಾಗಿದ್ದವು. ಇಂಥ ಅನುಭವ ವಿಮಾನಯಾನದಲ್ಲಿ ಲಭಿಸುವುದಿಲ್ಲ ಎನ್ನುತ್ತಾರೆ ಹುಬೋಲ್ಟ್.  ತನ್ನ ನಂಬಿಕಸ್ಥ ಶ್ವಾನ ಹೆಕ್ಸ್ ಜೊತೆ ಜರ್ಮನಿಯಿಂದ ರಷ್ಯಾಗೆ ತೆರಳಿದ ಹುಬೋಲ್ಟ್ ತನ್ನ ಹಳೆ ಟ್ಯಾಕ್ಟರ್ ಟ್ರೇಲರ್‍ನಲ್ಲಿ ಪುಟ್ಟ ಮನೆ ನಿರ್ಮಿಸಿ ಮಾರ್ಗಮಧ್ಯೆ ವಿಶ್ರಾಂತಿ ಪಡೆಯುತ್ತಾರೆ. ಟ್ರೇರಲ್‍ನಲ್ಲಿ ಒಂದು ಸೈಕಲ್ ಕೂಡ ಇದೆ.

Footboll-01

ಜೂನ್ 17ರಂದು ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಜರ್ಮನ್ ಮತ್ತು ಮೆಕ್ಸಿಕೋ ಪಂದ್ಯದ ವೇಳೆ ಅಲ್ಲಿಗೆ ತಲುಪುವುದು ಹುಬೋಲ್ಟ್ ಗುರಿ. ನಂತರ ಸೇಂಟ್ ಪೀಟರ್ಸ್‍ಬರ್ಗ್‍ಗೆ ತೆರಳಿ ಅಲ್ಲಿ ಪಂದ್ಯ ವೀಕ್ಷಿಸುತ್ತಾರೆ. ಬಳಿಕ ಅಲ್ಲಿಂದ ನೌಕೆ ಮೂಲಕ ಫಿನ್ಲೆಂಡ್ ರಾಜಧಾನಿ ಹೆಲ್ಸಿಂಕಿಗೆ ಪ್ರಯಾಣ ಬೆಳೆಸಿ ಡೆನ್ಮಾರ್ಕ್ ಮಾರ್ಗವಾಗಿ ತಮ್ಮ ತಾಯ್ನಾಡು ಜರ್ಮನಿಗೆ ಹಿಂದಿರುಗಲು ಈ ಸಾಹಸಿ ಉದ್ದೇಶಿಸಿದ್ದಾರೆ.

Footboll-03

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا