Urdu   /   English   /   Nawayathi

ಭಾರತಕ್ಕೆ ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್ ಮಾರಾಟಕ್ಕೆ ಅಮೆರಿಕ ಅಸ್ತು

share with us

ವಾಷಿಂಗ್ಟನ್: 13 ಜೂನ್ (ಫಿಕ್ರೋಖಬರ್ ಸುದ್ದಿ) ಭಾರತಕ್ಕೆ 930 ದಶಲಕ್ಷ ಡಾಲರ್‍ಗಳಿಗೆ ಆರು ಅಪಾಚೆ ದಾಳಿ ಹೆಲಿಕಾಪ್ಟರ್‍ಗಳನ್ನು ಮಾರಾಟ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಡಳಿತ ಅನುಮೋದನೆ ನೀಡಿದೆ. ಇದರೊಂದಿಗೆ ಭಾರತದ ಶಸ್ತ್ರಾಸ್ತ್ರ ಬಲಕ್ಕೆ ಹೊಸ ಅತ್ಯಾಧುನಿಕ ಅಸ್ತ್ರವೊಂದು ಸೇರ್ಪಡೆಯಾದಂತಾಗಿದೆ. ತಾಯ್ನಾಡು ರಕ್ಷಣೆ ಹಾಗೂ ಪ್ರಾದೇಶಿಕ ಆತಂಕವನ್ನು ಸಮರ್ಥವಾಗಿ ಎದುರಿಸಲು ಭಾರತಕ್ಕೆ ಆರು ಎಎಚ್-64ಇ ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್‍ಗಳನ್ನು ಟ್ರಂಪ್ ಆಡಳಿತ ಮಾರಾಟ ಮಾಡಲು ಸಮ್ಮತಿ ನೀಡಿದೆ ಎಂದು ಅಮೆರಿಕ ರಕ್ಷಣಾ ಇಲಾಖೆ ಪೆಂಟಗನ್ ಇಂದು ತಿಳಿಸಿದೆ.

Apache-03

ಈ ಸಂಬಂಧ ವಿದೇಶಾಂಗ ಇಲಾಖೆ ನಿರ್ಧಾರವನ್ನು ಪೆಂಟಗನ್ ರಕ್ಷಣಾ ಭದ್ರತೆ ಸಹಕಾರ ಸಂಸ್ಥೆಯು ಅಮೆರಿಕ ಕಾಂಗ್ರೆಸ್‍ಗೆ ತಿಳಿಸಿದೆ. ಯಾವುದೇ ಸಂಸದರ ವಿರೋಧ ಇಲ್ಲದಿದ್ದರೆ ಅತಿ ಶೀಘ್ರದಲ್ಲೇ ಮಾರಾಟ ಪ್ರಕ್ರಿಯೆ ಆರಂಭವಾಗಲಿದೆ. ಆರು ಅಪಾಚೆ ಹೆಲಿಕಾಪ್ಟರ್‍ಗಳಲ್ಲದೇ, ಅಗ್ನಿ ನಿಯಂತ್ರಣ ರೇಡಾರ್‍ಗಳು, ಹೆಲ್‍ಫೈರ್ ಲಾಂಗ್‍ಬೋ ಕ್ಷಿಪಣಿಗಳು, ಸ್ಟಿಂಗರ್ ಬ್ಲಾಕ್ ಐ-92ಎಚ್ ಕ್ಷಿಪಣಿಗಳು, ಇರುಳು ದೃಶ್ಯ ಸೆನ್ಸೋರ್‍ಗಳು ಹಾಗೂ ವೈರಿಗಳನ್ನು ಗುರುತಿಸುವ ಮಾರ್ಗದರ್ಶಿ ವ್ಯವಸ್ಥೆಗಳ ಮಾರಾಟಕ್ಕೂ ಒಪ್ಪಂದವಾಗಲಿದೆ.

Apache-04

ಅಪಾಚೆ ದಾಳಿ ಹೆಲಿಕಾಪ್ಟರ್‍ಗಳು ಭೂ ಮಾರ್ಗವಾಗಿ ನಡೆಯುವ ಶತ್ರುಗಳ ಆಕ್ರಮಣವನ್ನು ಸಮರ್ಥವಾಗಿ ಹಿಮ್ಮೆಟ್ಟಿಸಲು ಭಾರತದ ರಕ್ಷಣಾ ಸಾಮಥ್ರ್ಯ ಹೆಚ್ಚಿಸುತ್ತದೆ ಹಾಗೂ ಸಶಸ್ತ್ರ ಪಡೆಗಳನ್ನು ಆಧುನಿಕರಣಗೊಳಿಸಲು ನೆರವಾಗುತ್ತವೆ ಎಂದು ಪೆಂಟಗನ್ ಹಳಿದೆ.

Apache-01

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا