Urdu   /   English   /   Nawayathi

ಮಹಾರಾಷ್ಟ್ರದಲ್ಲಿ ಸುಳಿಗಾಳಿ ಸಹಿತ ಚಂಡಮಾರುತ ದೃಶ್ಯ ಕ್ಯಾಮೆರಾದಲ್ಲಿ ಸೆರೆ

share with us

ಪುಣೆ: 10 ಜೂನ್ (ಫಿಕ್ರೋಖಬರ್ ಸುದ್ದಿ) ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ಸುಂಟರಗಾಳಿ ಉಂಟಾಗಿದೆಯೇ? ಹೌದು, ಇಂಥಹದ್ದೊಂದು ಸುಳಿಗಾಳಿ(ಸುಂಟರಗಾಳಿ)ಯೊಂದಿಗೆ ರಭಸವಾಗಿ ಬರುತ್ತಿರುವ ಚಂಡಮಾರುತದ ದೃಶ್ಯ ಜೂನ್‌ 8ರಂದು ಪುಣೆಯ ರಾಮಲ್ಲಾ ಹಳ್ಳಿಯಲ್ಲಿ ಉಂಟಾಗಿದ್ದು, ಈ ದೃಶ್ಯ ವೈರಲ್‌ ಆಗಿದೆ.

ಗಾಢವಾದ ಸುರುಳಿಯಾಕಾರದಲ್ಲಿ ಭೂಮಿಯಿಂದ ಆಗಸದತ್ತ ಸುಳಿಗಾಳಿ ಮೇಲೆದ್ದಿರುವ ಸ್ಥಿತಿಯನ್ನು ಗಮನಿಸಲಾಗಿದೆ. ಈ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರಹಿಡಿಯಲಾಗಿದೆ.

ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ ಸುಂಟರಗಾಳಿ ಅಧಿಕೃತವಾಗಿ ದಾಖಲಿಸಲ್ಪಟ್ಟಿದೆ ಎಂದು ಸೆಂಟರ್‌ ಫಾರ್‌ ಸಿಟಿಜನ್‌ ಸೈನ್ಸ್‌ ಸಂಶೋಧನಾ ಸಂಸ್ಥೆ ತಿಳಿಸಿದೆ ಎಂದು ಎನ್‌ಡಿ ಟಿ.ವಿ ವರದಿ ಮಾಡಿದೆ.

ಮೂವರು ಸದಸ್ಯರನ್ನು ಒಳಗೊಂಡ ಹಿರಿಯ ವಿಜ್ಞಾನಿ ಡಾ.ಜೆ.ಆರ್‌. ಕುಲಕರ್ಣಿ ಅವರ ನೇತೃತ್ವದ ಸಿಸಿಎಸ್‌ ತಂಡ, ಘಟನೆ ನಡೆದ 24 ಗಂಟೆಗಳ ಒಳಗೆ ಸ್ಥಳಕ್ಕೆ ಭೇಟಿ ನೀಡಿ ವಿದ್ಯಮಾನವನ್ನು ವಿಶ್ಲೇಷಿಸಿದೆ. ಈ ತಂಡ 10ಕ್ಕಿಂತ ಹೆಚ್ಚು ಪ್ರತ್ಯಕ್ಷ ಸಾಕ್ಷಿಯಾದವರನ್ನು ಸಂದರ್ಶಿಸಿದೆ. ಜತೆಗೆ, ಹವಾಮಾನ ವಿದ್ಯಮಾನದ ಕಾಲಾವಧಿ, ಮಾರ್ಗ ಮತ್ತು ತೀವ್ರತೆಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದೆ. ಪ್ರತ್ಯಕ್ಷ ದರ್ಶಿಗಳು ತೆಗೆದ ಚಿತ್ರಗಳು ಮತ್ತು ವಿಡಿಯೊಗಳನ್ನು ಸಂಗ್ರಹಿಸಿದೆ.

ಪ್ರಾಥಮಿಕ ವಿಶ್ಲೇಷಣೆ ನಡೆಸಿರುವ ಸಿಸಿಎಸ್‌ನ ವಿಜ್ಞಾನಿಗಳು, ಸುಂಟರಗಾಳಿ ಅವಧಿಯು 90ರಿಂದ 120 ಸೆಕೆಂಡುಗಳಾಗಿದ್ದು, 800ರಿಂದ 1,000 ಮೀಟರ್‌ಗಳ ವ್ಯಾಪ್ತಿಯನ್ನು ಒಳಗೊಂಡಿತ್ತು. ಪಂಪ್‌ ಹೌಸ್‌ ಮತ್ತು ದನದಕೊಟ್ಟಿಗೆಗಳ ತಗಡಿನ ಮೇಲ್ಚಾವಣಿಯ ಮೇಲ್ಬಾಗದಲ್ಲಿ ಈ ಸುಂಟರಗಾಳಿ ಚಲಿಸಿದೆ. ಆದರೆ, ಯಾವುದೇ ಹಾನಿಯುಂಟು ಮಾಡಿಲ್ಲ ಎಂದು ಹೇಳಿದ್ದಾರೆ.

ಸುಳಿಗಾಳಿಯ ತೀವ್ರತೆ ಕಡಿಮೆಯಾದ ನಂತರ ಅಲ್ಲಿ ಉತ್ತಮ ಮಳೆ ಬಿದ್ದಿದ್ದು, 100 ಮಿ.ಮೀ. ಮಳೆ ದಾಖಲಾಗಿದೆ ಎಂದು ತಂಡ ಹೇಳಿದೆ.
ಸುಂಟರಗಾಳಿಯು ಉಂಟು ಮಾಡುವ ಜೀವ ಮತ್ತು ಆಸ್ತಿ ಹಾನಿಯನ್ನು ಆಧರಿಸಿ ಅದರ ತೀವ್ರತೆಯನ್ನು ಮಾಪನ ಮಾಡಲಾಗುತ್ತದೆ. ಸುಂಟರಗಾಳಿ F0ಯಿಂದ F5ವರೆಗೆ ಇರುತ್ತದೆ ಎಂದು ಡಾ.ಕುಲಕರ್ಣಿ ಹೇಳಿದ್ದಾರೆ.

ಪುಣೆಯ ರಾಮಲ್ಲಾ ಹಳ್ಳಿಯಲ್ಲಿ ಉಂಟಾಗಿದ್ದ ಸುಂಟರಗಾಳಿ.

ಅಮೆರಿಕ, ಆಸ್ಟ್ರೇಲಿಯಾ, ದಕ್ಷಿಣ ಅಮೆರಿಕ, ಆಫ್ರಿಕಾ ಮತ್ತು ಆಗ್ನೇಯ ಏಷ್ಯಾದ ಕೆಲ ಭಾಗಗಳಲ್ಲಿ ಸುಂಟರಗಾಳಿ ಸಾಮಾನ್ಯವಾಗಿ ಉಂಟಾಗುತ್ತವೆ. ಮುಂಗಾರಿನ ನಂತರ ನೆರೆಯ ಬಾಂಗ್ಲಾದೇಶದಲ್ಲಿ ಸುಂಟರಗಾಳಿ ಅಪರೂಪದ ಸಂಗತಿಗಳೇನಲ್ಲ. 1989ರಲ್ಲಿ ಢಾಕಾ ಸಮೀಪದ ದೌಲತ್‌ಪುರ ಮತ್ತು ಮಣಿಕುಂಜ್‌ ಜಿಲ್ಲೆಗಳಲ್ಲಿ ಭೀಕರ, ಅತ್ಯಂತ ಕೆಟ್ಟ ಸುಂಟರಗಾಳಿ ಉಂಟಾಗಿದ್ದು ದಾಖಲಾಗಿದೆ. ಈ ವೇಳೆ 1,300 ಜನ ಸಾವೀಗೀಡಾಗಿದ್ದರು.

https://youtu.be/k6GYba0bXTg

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا