Urdu   /   English   /   Nawayathi

ಜಗತ್ತಿನ ಅತಿ ವೇಗದ ಕ್ಷಿಪಣಿಗೆ ಮತ್ತಷ್ಟು ವೇಗ

share with us

‘ಮುಂದಿನ ಏಳರಿಂದ ಹತ್ತು ವರ್ಷಗಳಲ್ಲಿ ‘ಮ್ಯಾಕ್ 7’ ವೇಗದಲ್ಲಿ ಚಲಿಸುವ ಬ್ರಹ್ಮೋಸ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲಿದ್ದೇವೆ’ ಎಂದು ಬ್ರಹ್ಮೋಸ್ ಏರೊಸ್ಪೇಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಸುಧೀರ್ ಮಿಶ್ರಾ ಮಾಹಿತಿ ನೀಡಿದ್ದಾರೆ. ರಷ್ಯಾ ಮತ್ತು ಭಾರತ ಜಂಟಿಯಾಗಿ ಈ ಕ್ಷಿಪಣಿಯನ್ನು ಅಭಿವೃದ್ಧಿಪಡಿಸುತ್ತಿವೆ

**

ಏನಿದು ಮ್ಯಾಕ್

ಶಬ್ದದ ವೇಗಕ್ಕೆ (ಪ್ರತಿ ಗಂಟೆಗೆ 1,235 ಕಿ.ಮೀ.) ಸರಿಸಮನಾದ ವೇಗವನ್ನು ಮ್ಯಾಕ್ ಎಂದು ಕರೆಯಲಾಗುತ್ತದೆ. ವಿಮಾನ, ಕ್ಷಿಪಣಿ, ರಾಕೆಟ್‌ಗಳ ವೇಗವನ್ನು ಉಲ್ಲೇಖಿಸುವಾಗ ಮ್ಯಾಕ್ ಎಂಬ ಪರಿಭಾಷೆಯನ್ನು ಬಳಸಲಾಗುತ್ತದೆ. ಭೂಮಿಯ ಮೇಲ್ಮೈನಿಂದ ಮೇಲಕ್ಕೆ ಏರಿದಂತೆ ಮ್ಯಾಕ್‌ನ ಪ್ರಮಾಣ ಬದಲಾಗುತ್ತಾ ಹೋಗುತ್ತದೆ.

**

ಮ್ಯಾಕ್‌ ಮತ್ತು ಬ್ರಹ್ಮೋಸ್‌ನ ವೇಗ

ಮ್ಯಾಕ್ 1: 1,235 ಕಿ.ಮೀ. ವೇಗ (ಇದು ಶಬ್ದದ ವೇಗ)

ಮ್ಯಾಕ್ 2 : 2,470 ಕಿ.ಮೀ. ವೇಗ

ಮ್ಯಾಕ್ 3: 3,705 ಕಿ.ಮೀ. ವೇಗ

ಮ್ಯಾಕ್ 4: 4,940 ಕಿ.ಮೀ. ವೇಗ

ಮ್ಯಾಕ್ 5: 6,175 ಕಿ.ಮೀ. ವೇಗ

ಮ್ಯಾಕ್ 6: 7,410 ಕಿ.ಮೀ. ವೇಗ

ಮ್ಯಾಕ್ 7: 8,645 ಕಿ.ಮೀ. ವೇಗ

**

ಮ್ಯಾಕ್ 2.8

ಪ್ರತಿ ಗಂಟೆಗೆ 3,458 ಕಿ.ಮೀ.

ಸದ್ಯ ಭಾರತೀಯ ಸೇನಾಪಡೆಗಳಲ್ಲಿ ನಿಯೋಜನೆಯಾಗಿರುವ ಬ್ರಹ್ಮೋಸ್ ಕ್ಷಿಪಣಿಯ ವೇಗವಿದು.

ಇದು ಜಗತ್ತಿನ ಅತ್ಯಂತ ವೇಗದ ಕ್ಷಿಪಣಿಯಾಗಿದೆ. ಭಾರಿ ವೇಗ ಮತ್ತು ಅತ್ಯಂತ ಕೆಳಮಟ್ಟದಲ್ಲಿ ಕ್ಷಿಪ್ರವಾಗಿ ಚಲಿಸುವುದರಿಂದ ಜಗತ್ತಿನ ಯಾವ ಕ್ಷಿಪಣಿ ನಿರೋಧಕ ವ್ಯವಸ್ಥೆಗಳೂ ಬ್ರಹ್ಮೋಸ್‌ ಅನ್ನು ಪತ್ತೆ ಮಾಡಲು ಸಾಧ್ಯವಿಲ್ಲ.

**

ಮ್ಯಾಕ್ 3.5

ಪ್ರತಿ ಗಂಟೆಗೆ 4,323 ಕಿ.ಮೀ.

ಇದು ಮುಂದಿನ ಹಂತದ ಬ್ರಹ್ಮೋಸ್ ಕ್ಷಿಪಣಿಯ ವೇಗ.

ಇದರ ಅಭಿವೃದ್ಧಿ ಮತ್ತು ವಿನ್ಯಾಸ ಕಾರ್ಯ ಬಹುತೇಕ ಮುಗಿದಿದ್ದು, ಕಾರ್ಯಾಚರಣಾ ಪರೀಕ್ಷೆಗಳು ನಡೆಯಬೇಕಿವೆ. ಈ ವೇಗವನ್ನು ಸಾಧಿಸಲು ಈಗ ಬಳಸುತ್ತಿರುವ ಎಂಜಿನ್‌ ಅನ್ನೇ ತುಸು ಮಾರ್ಪಡಿಸಬೇಕಿದೆ

**

ಮ್ಯಾಕ್‌ 5.1

ಪ್ರತಿ ಗಂಟೆಗೆ 6,290 ಕಿ.ಮೀ

ಇದು ಬ್ರಹ್ಮೋಸ್‌ನ ಹೊಸ ತಲೆಮಾರಿನ ಕ್ಷಿಪಣಿಯ ವೇಗ.

ಮುಂದಿನ ಐದು ವರ್ಷಗಳಲ್ಲಿ ಇದನ್ನು ಸೇವೆಗೆ ನಿಯೋಜಿಸಲು ಯೋಜನೆ ರೂಪಿಸಿಕೊಳ್ಳಲಾಗಿದೆ. ಈ ವೇಗವನ್ನು ಸಾಧಿಸಲು ಈಗ ಬಳಸುತ್ತಿರುವ ಎಂಜಿನ್‌ ಅನ್ನು ಭಾರಿ ಪ್ರಮಾಣದಲ್ಲಿ ಮಾರ್ಪಡಿಸಬೇಕಿದೆ.

**

ಮ್ಯಾಕ್ 7

ಪ್ರತಿ ಗಂಟೆಗೆ 8,645 ಕಿ.ಮೀ

ಬ್ರಹ್ಮೋಸ್‌ನ ಹೈಪರ್‌ಸೋನಿಕ್ ಅವತರಣಿಕೆಯ ವೇಗ. ಈ ಅವತರಣಿಕೆಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲು 10 ವರ್ಷಗಳ ಕಾಲಮಿತಿ ಹಾಕಿಕೊಳ್ಳಲಾಗಿದೆ. ಈ ವೇಗವನ್ನು ಸಾಧಿಸಲು ಹೊಸ ಎಂಜಿನ್‌ ಅನ್ನೇ ಅಭಿವೃದ್ಧಿಪಡಿಸಬೇಕಿದೆ. ಆ ಕೆಲಸವನ್ನು ರಷ್ಯಾ ಮಾಡಲಿದೆ. ಎಂಜಿನ್ ಮತ್ತು ಕ್ಷಿಪಣಿಯ ನಿಯಂತ್ರಣಕ್ಕೆ ಬೇಕಾದ ತಂತ್ರಾಂಶ, ದೇಹ, ಪಥನಿರ್ದೇಶನ ವ್ಯವಸ್ಥೆಗಳನ್ನು ಭಾರತ ಅಭಿವೃದ್ಧಿಪಡಿಸಲಿದೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا