Urdu   /   English   /   Nawayathi

ತೆರೆದಿದ್ದು ಸ್ಪಾ, ನಡೆಸಿದ್ದು ವೇಶ್ಯಾವಾಟಿಕೆ

share with us

ಬೆಂಗಳೂರು: 23 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಬಾಡಿ ಮಸಾಜ್‌ಗಾಗಿ ಸ್ಪಾ ಕೇಂದ್ರ ತೆರೆದು, ನೆರೆಹೊರೆಯವರಿಗೆ ತಿಳಿಯದಂತೆ ಅಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಕಟ್ಟಡದ ಮೇಲೆ ದಾಳಿ ನಡೆಸಿದ ಕೋಣನಕುಂಟೆ ಪೊಲೀಸರು ಇಬ್ಬರು ಯುವತಿಯರನ್ನು ರಕ್ಷಿಸಿದ್ದಾರೆ. ಬಾಡಿ ಅಂಡ್‌ ಬ್ಯೂಟಿ ಸ್ಪಾ ಕೇಂದ್ರದ ಹೆಸರಲ್ಲಿ ಅನುಮತಿ ಪಡೆದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಗೊಟ್ಟಿಗೆರೆಯ ಬಿಥಿ (27) ಮತ್ತು ಕೋರಮಂಗಲದ ಪಾಸಿಲ್‌ ಕೆ.ಪಿ ಅವರನ್ನು ಬಂಧಿಸಿದ್ದಾರೆ. 4000 ನಗದು, ಕೃತ್ಯಕ್ಕೆ ಬಳಸಿದ್ದ ಎರಡು ಮೊಬೈಲ್, ಗ್ರಾಹಕರ ನೋಂದಣಿ ಪುಸ್ತಕ ಮತ್ತು ಎರಡು ಕಾಂಡೋಮ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಪಶ್ಚಿಮ ಬಂಗಾಳದ ಶುಲಿ (25) ಮತ್ತು ಲವೋಣಿ (22) ಅವರನ್ನು ರಕ್ಷಿಸಲಾಗಿದೆ. ಪಶ್ಚಿಮ ಬಂಗಾಳ ಮೂಲದ ಬಿಥಿ ಅವರು ಮೂರು ತಿಂಗಳ ಹಿಂದೆ ನಗರಕ್ಕೆ ಬಂದು ಗೊಟ್ಟಿಗೆರೆಯಲ್ಲಿ ನೆಲೆಸಿದ್ದರು. ಸ್ಥಳೀಯ ಸಂಸ್ಥೆಗಳ ಅನುಮತಿ ಪಡೆದು ಅಲ್ಲಿನ ಬಿ.ಜಿ. ರಸ್ತೆಯ ಸುವರ್ಣ ವಾಣಿಜ್ಯ ಸಂಕೀರ್ಣದ 2ನೇ ಮಹಡಿಯಲ್ಲಿ ಅವರು ಸ್ಪಾ ಕೇಂದ್ರ ಆರಂಭಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಈ ಕೇಂದ್ರದಲ್ಲಿ ಕಳೆದ ಒಂದೂವರೆ ತಿಂಗಳಿಂದ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋಗಿ ನೋಡಿದಾಗ ಅಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ಗೊತ್ತಾಗಿದೆ. ಇದಕ್ಕೆ ಇಬ್ಬರು ಯುವತಿಯರನ್ನು ಬಳಸಿಕೊಳ್ಳಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا