Urdu   /   English   /   Nawayathi

ಕುಮಟಾದಲ್ಲಿ ಕಳುವು

share with us

ಕುಮಟಾ: 19 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಕುಮಟಾ ತಾಲೂಕಿನ ಮನೆಯೊಂದರಲ್ಲಿ ಕಳ್ಳತನ ನಡೆದಿದೆ. ಹಳೇ ಮೀನು ಮಾರುಕಟ್ಟೆಯ ರಸ್ತೆ ಪಕ್ಕದಲ್ಲಿರುವ ಜೂಲಿ ಫರ್ನಾಂಡಿಸ್ ಅವರ ಮಾಲಿಕತ್ವದ ಅಲೇಲೂಯಾ ಎಂಬ ಹೆಸರಿನ ಮನೆಯಲ್ಲಿ ಈ ಕಳ್ಳತನ ನಡೆದಿದೆ ಎನ್ನಲಾಗಿದೆ. ಕಳ್ಳರು ಮುಂಭಾಗದ ಬೀಗ ಮುರಿದು ಮನೆಯೊಳಗೆ ನುಗ್ಗಿ ಕಪಾಟಿನಲ್ಲಿದ್ದ 20,000 ನಗದು ಹಣ ಮತ್ತು ಲಂಕ್ಷಾಂತರ ಬೆಲೆ ಬಾಳುವ ಚಿನ್ನಾಭರಣವನ್ನು ಕದ್ದಿದ್ದಾರೆ ಎನ್ನಲಾಗಿದೆ. ಮನೆಯವರು ಎರಡು ದಿನಗಳ ಹಿಂದೆ ಗೋವಾದಲ್ಲಿದ್ದ ಅವರ ಸಂಬಂಧಿಯವರ ಮನೆಗೆ ಹೋಗಿ ಮಂಗಳವಾರದಂದು ಕುಮಟಾ ಮರಳಿದ್ದು, ಮನೆಯ ಮುಂಭಾಗದ ಬಾಗಿಲಿನ ಬೀಗ ಮುರಿದಿದ್ದನ್ನು ಕಂಡು ಬೆರಗಾಗಿ ಮನೆಯ ಒಳಗೆ ವಸ್ತುಗಳೆಲ್ಲಾ ಹರಡಿರುವುದನ್ನು ಕಂಡು ಕಳ್ಳತನವಾಗಿರುವುದು ಖಚಿತಗೊಂಡು ತಕ್ಷಣ ಪೋಲೀಸರಿಗೆ ದೂರು ನೀಡಿದ್ದಾರೆ. ಮನೆಯಲ್ಲಿದ್ದ ಒಂದು ಜೊತೆ ಚಿನ್ನದ ಬಳೆ, ಎರಡು ಚೈನ್, ಎರಡು ಉಂಗುರ ಹಾಗೂ ಕಿವಿಯ ಓಲೆಗಳನ್ನು ದೋಚಿದ್ದಾರೆ ಎಂದು ತಿಳಿದು ಬಂದಿದೆ. ಪೋಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا