Urdu   /   English   /   Nawayathi

ಟ್ರಂಪ್ ಟವರ್ 50ನೇ ಮಹಡಿಯಲ್ಲಿ ಬೆಂಕಿ ಆಕಸ್ಮಿಕ : ವೃದ್ಧ ಸಾವು, ಹಲವರಿಗೆ ಗಾಯ

share with us

ನ್ಯೂಯಾರ್ಕ್: 08 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಅಮೆರಿಕದ ಗಗನಚುಂಬಿ ನಗರಿ ನ್ಯೂಯಾರ್ಕ್‍ನಲ್ಲಿರುವ ಟ್ರಂಪ್ ಟವರ್‍ನ 50ನೇ ಮಹಡಿಯಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟು, ರಕ್ಷಣಾ ಸಿಬ್ಬಂದಿ ಸೇರಿದಂತೆ ಅನೇಕರು ಗಾಯಗೊಂಡಿರುವ ಘಟನೆ ನಡೆದಿದೆ. ನಿನ್ನೆ ರಾತ್ರಿ 9ರ ಸಮಯದಲ್ಲಿ 50ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಜ್ವಾಲೆಗಳನ್ನು ನಂದಿಸಿ ಶೋಧ ನಡೆಸಿದಾಗ 67 ವರ್ಷದ ಟೊಡ್ ಬ್ರಾಸ್ನೆರ್ ಎಂಬ ವೃದ್ದ ಪ್ರಜ್ಞಾಶೂನ್ಯರಾಗಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಅಗ್ನಿಶಮನದ ವೇಳೆ ರಕ್ಷಣ ಕಾರ್ಯಕರ್ತರೂ ಸೇರಿದಂತೆ ಕೆಲವರಿಗೆ ಗಾಯಗಳಾಗಿವೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا