Urdu   /   English   /   Nawayathi

ಶೀನಾ ಬೋರಾ ಕೊಲೆ ಆರೋಪಿ ಆಸ್ಪತ್ರೆಗೆ ದಾಖಲು

share with us

ಮುಂಬೈ: 07 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಶೀನಾ ಬೋರಾ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಐಎನ್ಎಕ್ಸ್ ಮಾಧ್ಯಮ ಸಂಸ್ಥೆಯ ಸಹ ಸಂಸ್ಥಾಪಕಿ ಇಂದ್ರಾಣಿ ಮುಖರ್ಜಿ ಅವರು ಜೈಲಿನಲ್ಲಿ ಅಸ್ವಸ್ಥಗೊಂಡಿದ್ದು, ಬೈಕುಲ್ಲಾದ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದ್ರಾಣಿ ಅವರು ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದು, ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಸಿಪಿ ವೀರೇಂದ್ರ ಮಿಶ್ರಾ ತಿಳಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ನಡೆದ ವಿಚಾರಣೆಗೆ ಹಾಜರಾಗಿದ್ದ ಮುಖರ್ಜಿ ಸಂಜೆ ಐದಕ್ಕೆ ಜೈಲಿಗೆ ಮರಳಿದ್ದರು. ರಾತ್ರಿ ಹತ್ತುವರೆಗೆ ಅವರು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲಿದ್ದರು. ಅವರನ್ನು ಜೈಲು ಅಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿದ್ದರು. ಶೀನಾ ಅವರನ್ನು 2012ರ ಏಪ್ರಿಲ್ 24ರಂದು ಕೊಲೆಗೈದು, ಸಮೀಪದ ರಾಯಗಡ ಅರಣ್ಯದಲ್ಲಿ ದೇಹವನ್ನು ಮರುದಿನ ಸುಟ್ಟುಹಾಕಲಾಗಿದೆ ಎಂದು ಪೊಲೀಸರು ಆರೋಪಿಸಿದ್ದರು. 

ಶೀನಾ ಅವರ ಸಹೋದರ ಮಿಖಾಯಿಲ್ ಬೋರಾ ಅವರನ್ನು ಕೊಲೆ ಮಾಡಲು ಯತ್ನಿಸಿದ ಆರೋಪ ಇಂದ್ರಾಣಿ ಮತ್ತು ಸಂಜೀವ್ ಖನ್ನಾ ವಿರುದ್ಧ ಹೊರಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿ ಇಂದ್ರಾಣಿ ಅವರು ಜೈಲು ಶಿಕ್ಷೆ ಎದುರಿಸುತ್ತಿದ್ದಾರೆ.

ತ್ರೀ ಬಿಎಚ್ಕೆ ಫ್ಲಾಟ್ ಶೀನಾ ಕೊ ಮಿಲ್ಗಯಾ ಹೈ...
ಇಂದ್ರಾಣಿ ಮುಖರ್ಜಿ ತನ್ನ ಪುತ್ರಿ ಶೀನಾಳನ್ನು ಹತ್ಯೆಗೈದ ಕೂಡಲೇ ಹೇಳಿದ ಮೊದಲ ಮಾತು ಇದೆಂದು ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಂದ್ರಾಣಿ, ಸಂಜೀವ್ ಖನ್ನಾ, ಶಾಮ್ವರ್ ರಾಯ್ ವಿರುದ್ಧ  ಸಿಬಿಐ ಸಲ್ಲಿಸಿರುವ ಸಾವಿರ ಪುಟಗಳ ದೋಷಾರೋಪ ಪಟ್ಟಿಯಲ್ಲಿ ಸಂಭಾಷಣೆಯನ್ನು ದಾಖಲಿಸಲಾಗಿದೆ.

ಶೀನಾ ಕೊಲೆ ಬಳಿಕ ದೇಹವನ್ನು ಅರಣ್ಯದಲ್ಲಿ ಎಸೆದ ಸಂದರ್ಭದಲ್ಲಿ ನಡೆದ ಮಾತುಕತೆಗಳು, ಇತರ ಸಾಕ್ಷಿಗಳನ್ನು ಸಿಬಿಐ ದೋಷಾರೋಪ ಪಟ್ಟಿಯಲ್ಲಿ ಸೇರಿಸಿದೆ. ಶೀನಾ ಕುತ್ತಿಗೆಗೆ ಬಟ್ಟೆ ಬಿಗಿದು ಇಂದ್ರಾಣಿ ಕೊಲೆ ಮಾಡಿದ್ದಾರೆ ಎಂದು ಆಪಾದಿಸಲಾಗಿದೆ.

ಶೀನಾ ಬೋರಾ ತನ್ನ ಸಹೋದರಿ ಎಂದು ಇಂದ್ರಾಣಿ ಮುಖರ್ಜಿ  ಹೇಳಿಕೊಂಡಿದ್ದರು.  ಆದರೆ, ಶೀನಾ ಆಕೆಯ ಮೊದಲ ಪತಿ ಸಿದ್ದಾರ್ಥ ದಾಸ್ ಎನ್ನುವವರ ಮಗಳು ಎಂಬ ಸಂಗತಿ ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಸ್ಟಾರ್ ಟಿವಿ’ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೀಟರ್ ಮುಖರ್ಜಿ ಅವರ ಪತ್ನಿ ಇಂದ್ರಾಣಿ ಮುಖರ್ಜಿ ಅವರನ್ನು ಮುಂಬೈ ಪೊಲೀಸರು ಬಂಧಿಸಿದ ಸಂದರ್ಭ ಬೆಳಕಿಗೆ ಬಂದಿತ್ತು.

ಕ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا