Urdu   /   English   /   Nawayathi

ಡ್ರಗ್ಸ್‌ ಕಳ್ಳಸಾಗಣೆ: DU, JNU, Amity ವಿದ್ಯಾರ್ಥಿಗಳು ಸೆರೆ

share with us

ಹೊಸದಿಲ್ಲಿ: 31 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಮಾದಕ ದ್ರವ್ಯ ಹೊಂದಿದ ಕಾರಣಕ್ಕೆ ನರ್ಕಾಟಿಕ್ಸ್‌ ಕಂಟ್ರೋಲ್‌ ಬ್ಯೂರೋ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಿ ಅವರಲ್ಲಿದ್ದ 1.140 ಕೆಜಿ ಕನಾಬೀಸ್‌ ಮತ್ತು ಮೂರು ಎಲ್‌ಎಸ್‌ಡಿ ಬ್ಲಾಟ್‌ ಪೇಪರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. 

ನಾಲ್ವರು ಬಂಧಿತರಲ್ಲಿ ಇಬ್ಬರು ದಿಲ್ಲಿ ವಿಶ್ವವಿದ್ಯಾಲಯದ ಹಿಂದು ಕಾಲೇಜಿನ ವಿದ್ಯಾರ್ಥಿಗಳು; ಒಬ್ಟಾತ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದವ; ಮತ್ತು ಇನ್ನೊಬ್ಬ ಎಮಿಟಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಎಂದು ತನಿಖೆಯಲ್ಲಿ ಗೊತ್ತಾಗಿದೆ. 

ದಿಲ್ಲಿ ವಲಯದ ಎನ್‌ಸಿಬಿ ಈ ನಾಲ್ಕು ಬಂಧಿತ ವಿದ್ಯಾರ್ಥಿಗಳ ವಿರುದ್ಧ ಮಾದಕ ದ್ರವ್ಯ ನಿಯಂತ್ರಣ ಕಾಯಿದೆಯಡಿ ಕೇಸು ದಾಖಲಿಸಿಕೊಂಡಿದ್ದಾರೆ.

ಎನ್‌ಸಿಬಿ ಉಪ ಮಹಾ ನಿರ್ದೇಶಕ (ಉತ್ತರ) ಎಸ್‌ ಕೆ ಝಾ ಅವರು ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿ, "ಬಂಧಿತ ವಿದ್ಯಾರ್ಥಿಗಳಾದ ಅನಿರುಧ್‌ ಮಾಥುರ್‌, ತೆನ್‌ಜಿನ್‌ ಫ‌ುನ್‌ಶೋಗ್‌ ಮತ್ತು ಸ್ಯಾಲಿ ಮಲಿಕ್‌ ಮಾದಕ ದ್ರವ್ಯ ವ್ಯಸನಿಗಳಾಗಿದ್ದು ಗೌರವ್‌ ಎಂಬಾತನಿಂದ ಇವರು ಮಾದಕ ದ್ರವ್ಯ ಪಡೆಯುತ್ತಿದ್ದರು. ದಿಲ್ಲಿ ವಿವಿ ಕ್ಯಾಂಪಸ್‌ನಲ್ಲಿ ಮಾದಕ ದ್ರವ್ಯ ಬಳಕೆ ವ್ಯಾಪಕವಾಗಿದೆ ಎಂದು ಇವರು ಹೇಳಿದ್ದಾರೆ. ಕ್ಯಾಂಪಸ್‌ಗೆ ಮಾದಕ ದ್ರವ್ಯ ಪೂರೈಸುವ ಕಳ್ಳಸಾಗಣೆಗಾರರ ಬಗ್ಗೆ ಇವರು ಮಾಹಿತಿ ನೀಡಿದ್ದಾರೆ.ಅದನ್ನೀಗ ಪರಿಶೀಲಿಸಿ ಮುಂದಿನ ಕಾರ್ಯಾಚರಣೆ ನಡೆಸಲಾಗುವುದು' ಎಂದು ತಿಳಿಸಿದ್ದಾರೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا